ಜಯಂತ ಕಾಯ್ಕಿಣಿ ನಮ್ಮೆಲ್ಲರಿಗೂ ಚಿರಪರಿಚಿತರು ಹಾಗೂ ಅತ್ಯಂತ ನೆಚ್ಚಿನ ವ್ಯಕ್ತಿ. ವಿವಿಧ ರೂಪಗಳಲ್ಲಿ ತಮ್ಮ ಬರಹದಿಂದ ಹಾಗೂ ರಸಮಯವಾದ ಮಾತುಗಳಿಂದ ಸುಮಾರು ಐವತ್ತು ವರ್ಷಗಳ ಕಾಲ ನಮ್ಮೆಲರ ಮನೆ ಮತ್ತು ಮನ ತುಂಬಿದ್ದಾರೆ. ಅವರಲ್ಲಿ ಎಷ್ಟು ಅಸಾಧಾರಣ ಪ್ರತಿಭೆ ಇದೆಯೋ ಅಷ್ಟೇ ಸರಳತೆಯೂ ಇದೆ. ಅವರ ಬಾಲ್ಯ, ಪೋಷಕರು, ಮಾರ್ಗದರ್ಶಕರು, ಬರವಣಿಗೆಯ ವಿಧಾನ, ಆಸಕ್ತಿಗಳು ಮತ್ತು ಇನ್ನಿತರ ವಿಷಯಗಳ ಬಗ್ಗೆ ಏನು ಹೇಳುತ್ತಾರೆಂದು ಈ ಮನಸೆಳೆಯುವ ಸಲ್ಲಾಪದಲ್ಲಿ ಓದೋಣ.
ಚಿತ್ರಗಳು ಕೃಪೆ: ಜಯಂತ ಕಾಯ್ಕಿಣಿ
ನೀವು ಬಹಳ ಚಿರಪರಿಚತರು ಎಲ್ಲರಿಗೂ. ಬಹಳಷ್ಟು ಸಂದರ್ಶನಗಳಲ್ಲಿ ಭಾಗವಹಿಸಿದ್ದೀರಿ. ಯಾರೂ ಕೆಳದೇರೊಂತಹ ಪ್ರಶ್ನೆ ಕೇಳುವುದು ಕಷ್ಟ. ಆದರೂ ಸ್ವಲ್ಪ ಪ್ರಯತ್ನ ಮಾಡ್ತಿವಿ ಏನಾದರೂ ಹೊಸ ತರಹದ ಪ್ರಶ್ನೆ ಕೇಳಬೇಕು ಅಂತ.
ಜಯಂತ ಕಾಯ್ಕಿಣಿ: ಅರವಿಂದ್, ನನಗೆ ಬಹಳ ಖುಷಿ ನಿಮ್ಮ ಜೊತೆ ಈ ತರ ಮಾತಾಡುವುದಕ್ಕೆ, ಹರಟೆ ಹೊಡೆಯೋದಕ್ಕೆ. [ನಾವು] ಬೇರೆ ಬೇರೆ ರೀತಿಯಲ್ಲಿ ಬದಲಾಗ್ತಾನೆ ಇರ್ತೀವಿ. ಅದೇ ವಿಷಯಕ್ಕೆ ಯಾವುದೋ ಒಂದು ಪ್ರಶ್ನೆಗೆ ಹತ್ತು ವರ್ಷದ ಹಿಂದೆ ಒಬ್ಬರಿಗೆ [ಉತ್ತರ] ಹೇಳಿರಬಹುದು. ಅದೇ ಪ್ರಶ್ನೆಗೆ ಇವತ್ತು ಉತ್ತರ ಬೇರೇನೋ ಆಗಬಹುದು. Stream of consciousness change ಆಗ್ತಾನೆ ಇರುತ್ತೆ. ನಮ್ಮ context ಬೇರೆ ಆಗುತ್ತೆ. ಹೀಗಾಗಿ It’s a pleasure. ಅದು ಸಂವಾದ ಯಾವಾಗಲೂ.
ನಿಮ್ಮ ಜೀವನ ಮೂರು ಭಾಗಗಳಾಗಿ ವಿಂಗಡಿಸಬಹುದು. ಮೊದಲನೇ ಮೂರನೇ ಒಂದು ಭಾಗ ನೀವು ಗೋಕರ್ಣ, ಕುಮಟಾ, ಧಾರವಾಡ ಅಂಥ ಕಡೆ ಇದ್ರಿ. ಆಮೇಲೆ ಮತ್ತೆ ಅಲ್ಲಿಂದ ನೀವು ಇನ್ನೊಂದು ಇಪ್ಪತ್ತು ಇಪ್ಪತ್ತೆರಡು ವರ್ಷ ಮುಂಬೈಗೆ ಹೋದ್ರಿ. ಅದಾದ್ಮೇಲೆ ನೀವು ಹೈದರಾಬಾದ್ ಮತ್ತೆ ಬೆಂಗಳೂರಿಗೆ ಬಂದ್ರಿ. ಪ್ರತಿಯೊಂದು ಸ್ಥಳದಲ್ಲೂ, ನಿಮ್ಮ ಜೀವನ ಮತ್ತು ನಿಮ್ಮ ವೃತ್ತಿ ಜೀವನದಲ್ಲಿ ಪ್ರಮುಖ ಬದಲಾವಣೆಗಳು ಬಂತು. ನೀವು ನಿಮ್ಮ ಒಂದು ಪ್ರಯಾಣವನ್ನು ಹಿಂದಿರುಗಿ ನೋಡಿದಾಗ ಏನನಿಸುತ್ತೆ ನಿಮಗೆ?
ಜಯಂತ ಕಾಯ್ಕಿಣಿ: Interesting ಆಗಿದೆ. ಅಂದ್ರೆ Mera Naam Joker ಫಿಲಂ ಬಂದಾಗ first of all ನಮಗೆ ಕುತೂಹಲ ಹುಟ್ಟಿದ್ದು ಅದರಲ್ಲಿ ಎರಡು interval ಇದೆ ಅಂತ. ಅದು ಮೂರು segment ಫಿಲಂ ಆಗಿತ್ತು. ಹಿಂಗೆ ನೀವು ಹೇಳುವಾಗ ನೆನಪಾಯ್ತು. First part ನೋಡಿದ್ರೆ intensely formative ಗೋಕರ್ಣ, ಅದು ತೀರ್ಥಕ್ಷೇತ್ರ. ಗೋಕರ್ಣ ಅಂದ್ರೆ ನನ್ನ ಕತೆಗಳಲ್ಲೆಲ್ಲ ಬರ್ತಾ ಇರುತ್ತಲ್ಲ ಸಾಮಾನ್ಯವಾಗಿ. Tourist ಬರ್ತಾ ಇರ್ತಾರಲ್ಲ, Tourist ಬಸ್ಸುಗಳನ್ನು ನೋಡುವುದೇ ನಮಗೆ ಹವ್ಯಾಸ. ಈ ಸಲ ಜಾತ್ರೆಯಲ್ಲಿ ಎಷ್ಟು ವೆಹಿಕಲ್ ಬಂತು ಕೌಂಟ್ ಮಾಡುವುದು ನಮ್ದು ಹವ್ಯಾಸ ಇತ್ತು. ಹೋದ ವರ್ಷ two hundred ಬಂದಿತ್ತು. ಈ ಸಲ three hundred ಬಂತು. ಆಮೇಲೆ ಆವಾಗ ಊರು ಆಚೆಗೆ ಬಸ್ ನಿಲ್ಲಿಸುತ್ತಿದ್ದರು. ಅಲ್ಲಿ ಹೋಗಿ ಬರೋದು ಅದನ್ನು ನೋಡಿಕೊಂಡು ಬರೋದೇ ಒಂದು hobby. ಆಮೇಲೆ ಬಂದಿರೋ ಜನಗಳದ್ದು ವೇಷಭೂಷ ನೋಡುವುದು. ಈ north ಕಡೆಯಿಂದ ಬರುವ ಡ್ರೆಸ್ಗಳು ಬೇರೆ ಇರುತ್ತಿರುವುದು. North ಅಂದ್ರೆ ಅವಾಗ ತುಂಬಾ ಇವತ್ತಿನ ತರ ಅಲ್ಲ, ಅಂದ್ರೆ ಮಹಾರಾಷ್ಟ್ರ ಕಡೆಯಿಂದ ಬಂದರೆ north ಆಗಿಬಿಡುವುದು ನಮಗೆ. ಗೋವಾ ಕಡೆಯಿಂದ ಬಂದರೆ ಇನ್ನೂ modern. ಅಲ್ಲಿಂದ ಬರುವ ಅವರೆಲ್ಲ ಸ್ವಲ್ಪ cooling glass ಹಾಕೊಂಡು ಬರೋರು. ಅಂದ್ರೆ ಆವಾಗ I am talking about 60s, 70s. ಹೀಗಾಗಿ so many things and ಮತ್ತೊಂದು ಏನು ಅಂದ್ರೆ any tourist place, whether it is a pilgrim centre or any place, by default it is liberal. ಅದು ತುಂಬಾ conventional ಆದರೆ ಬಿಸಿನೆಸ್ ನಡೆಯಲ್ಲ.
They are more liberal. ಹಾ, ಪರವಾಗಿಲ್ಲ ಅದೇನೋ ರೂಲ್ಸ್ ಬರೆದಿರ್ತಾರೆ. ಹೀಗೆ ಮಾಡಬಾರದು ಹಾಗೆ ಮಾಡದೆ ಒಳಗಡೆ ಹೋಗಬಾರದು ಎಲ್ಲ ಬರೆದಿರುತ್ತಾರೆ. But, ಬನ್ನಿ ಬನ್ನಿ ಬನ್ನಿ ಅಂತ ಒಳಗಡೆ ಕರೀತಾರೆ. ಮತ್ತೆ ನಮ್ಮ ಗೋಕರ್ಣದ ಮಜಾ ಏನಂತಂದ್ರೆ, ಕೆಲವೊಂದು ಕ್ಷೇತ್ರದಲ್ಲಿ ಯಾವುದೋ ಒಂದು ದೇವರು important ಇರುತ್ತೆ. ಗೋಕರ್ಣದಲ್ಲಿ hundreds of temples ಇರುತ್ತವೆ. ಹೀಗಾಗಿ ಇಡೀ ವರ್ಷ ಉತ್ಸವಗಳು, ಯಕ್ಷಗಾನಗಳು, ನಾಟಕ ಕಂಪನಿಗಳು. This enriched my childhood. And teachers… we got very good teachers. ಅವೆಲ್ಲ ನನ್ನ ಬಾಲ್ಯ.
ಆಮೇಲೆ hostel stay. ನಮ್ಮ ಊರಿಂದ ಕುಮಟಾ ಆಗ್ಲಿ, ಧಾರವಾಡ ಆಗ್ಲಿ, ಊರು ಬಿಟ್ಟು, ಮನೆ ಬಿಟ್ಟು ಬೇರೆ ಕಡೆ ಹೋಗೋದು first culture shock. ಅಲ್ಲಿ ಹೋದ ಮೇಲೆ ಕನ್ನಡ ಮೀಡಿಯಂ ಇಂದ ಇಂಗ್ಲಿಷ್ ಮೀಡಿಯಂಗೆ ಶಿಫ್ಟ್, ಅದು ಇನ್ನೊಂದು culture shock. ಏನು ಹೇಳ್ತಾರೆ ಅಂತಾನೆ ಗೊತ್ತಾಗಲ್ಲ, 10th ಆದ್ಮೇಲೆ. ಆವಾಗ ಒಂದು identity crisis.
ಊರಲ್ಲಿ ಇದ್ದಾಗ ಗೌರೀಶ್ ಕಾಯ್ಕಿಣಿ ನಮ್ಮ ತಂದೆ ಆಗಲೇ ಮೇಷ್ಟ್ರು. ಮೇಷ್ಟ್ರು ಮಗ ಅಂದ್ರೆ ಡಬಲ್ ಪ್ರಾಬ್ಲಮ್. ಚೆನ್ನಾಗಿ ಓದಿದ್ರು ಪ್ರಾಬ್ಲಮ್, ಚೆನ್ನಾಗಿ ಓದಿಲ್ಲದಿದ್ರೂ ಪ್ರಾಬ್ಲಮ್. ಓದಿದ್ರೆ ಅವನೇನು ಬಿಡು ಮಾಸ್ಟರ್ ಮಗ ಅಂತಾರೆ, ಓದಿಲ್ಲದಿದ್ರೆ ಏನೋ ನೀನು ಮಾಸ್ಟರ್ ಮಗ ಅಂತ ಇದ್ಕೊಂಡು ಕಡಿಮೆ ಮಾರ್ಕ್ಸ್ ಅಂತಾರೆ. ನಮಗೆ ಆ ಮಾಸ್ಟರ್ ಅನ್ನೋರು ನಾನಾ ರೂಪದಲ್ಲಿ ಊರಲ್ಲಿ ಬಂದು ಕಾಡ್ತಿದ್ರು ಹಾಗೆ.
Literature ಹುಚ್ಚು ನನಗೆ ಬಂದಿದ್ದು ನಾನು ಹಾಸ್ಟೆಲ್ ವಾಸ ಮಾಡಿದ ಮೇಲೆ. ಆ ರೀತಿ ಅಲ್ಲಿ ಒಂದು identity ನನಗೆ. ಬರೆಯುವುದು, ಪತ್ರಿಕೆಗೆ ಕಳಿಸುವುದು ಬಂತು. ಮಲ್ಲಿಗೆಯಲ್ಲಿ ಒಂದು ಕವಿತೆ, ಮತ್ತೆ ಪ್ರಜಾವಾಣಿಯಲ್ಲಿ ಒಂದು ಕವಿತೆ ಬಂದ ಕೂಡಲೇ ಎಲ್ಲೋ ನನ್ನ ಕವಿತೆ ಬಂದಿದೆ ಅಂತ ಏನೋ self esteem. Especially, ಹುಡುಗೀರು ಹೇಳಿದರಂತೂ ಇನ್ನೂ ಭಯಂಕರ. ಆಗಿನ್ನೂ ಹುಡುಗರು ಹುಡುಗಿಯರು division ಒಂದಿತ್ತಲ್ಲ. ಲೇಡೀಸ್ ರೂಮ್ ಅನ್ನೋದು most magnetic pull ಇರುವಂತ ಒಂದು ಕೇಂದ್ರವಾಗಿ ಕಾಣುತಿತ್ತು, ಭೂಮಂಡಲದಮೇಲೆ. ಆ ಕಡೆ ನೋಡೋಕ್ಕೆ ಆಗ್ತಿರ್ಲಿಲ್ಲ ನಮಗೆ.
ಧಾರವಾಡ – ಅಲ್ಲಿ ಇಡೀ ಕರ್ನಾಟಕದಿಂದ ಬಂದ ವಿದ್ಯಾರ್ಥಿಗಳು ಹಾಸ್ಟೆಲ್ ನಲ್ಲಿ. ಬಳ್ಳಾರಿ, ಮೈಸೂರು, ಧಾರವಾಡ, ದಾವಣಗೆರೆ ಇಂದ ಬೇರೆ ಬೇರೆ ಕನ್ನಡ [ಇತ್ತು]. ಅಲ್ಲಿ ಹೋದ್ಮೇಲೆ, [ನಾನು] first time English film ನೋಡಿದ್ದು … Dr. Zhivago, Tora Tora Tora…ನಂಗೆ English film ನೋಡೇ ಗೊತ್ತಿರಲಿಲ್ಲ. ಸಂಸ್ಕಾರ, first experimental film ಅಲ್ಲೇ ನೋಡಿದ್ದು. ಆಮೇಲೆ ಸತ್ತವರ ನೆರಳು ನಾಟಕ ನೋಡಿದೆ. ಕವಿಗೋಷ್ಠಿಯಲ್ಲಿ ಭಾಗವಹಿಸಲು ಶುರು ಮಾಡಿದೆ. ನನ್ನ ಮೊದಲ ಕವನ ಸಂಕಲನ ರಂಗದಿಂದೊಂದಿಷ್ಟು ದೂರ was released when I was a student in 1974. ಆವಾಗ ಬೆಂಗಳೂರಿಗೆ ಬಂದು, ಟ್ರೈ ಮಾಡಿದೆ ಜಾಬ್ಗೆ. But, ಇಲ್ಲಿ ಆದಷ್ಟು job prospects ಇರಲಿಲ್ಲ. ಅವಾಗ ಬರೀ CFTRI ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಇತ್ತು. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ I did not fare well in the interview ಅಡ್ಮಿಷನ್ ಗೆ, ರಿಸರ್ಚ್ಗೆ.
ಆಗ ಪಲ್ಲವಿ ರಿಲೀಸ್ ಆಗಿತ್ತು ಲಂಕೇಶ್ ಅವರದು. ಅದನ್ನು ನೋಡುವುದಕ್ಕೆ ಜಾಸ್ತಿ ಉತ್ಸಾಹ ಇತ್ತು. ಅಲ್ಲಿ ಲಂಕೇಶ್ ಇದ್ರು, ಭೇಟಿ ಆದೆ. I met him at the gate of the theatre. He was very keen asking ಹೇಗಿದೆ ಸಿನಿಮಾ ಅಂತ. ನಾನು ಚೆನ್ನಾಗಿದೆ ಅಂತ ಹೇಳಿದೆ. ಅದು ನೆನಪಿದೆ ನನಗೆ.
Then, I went to Bombay (now Mumbai). Bombay of course, liberated me in many ways. ಅದು second phase. Most of you have read it in my stories. ಈ caste, creed, ಅದು ಇದು ಎಲ್ಲದರಿಂದಲೂ ಬಿಡುಗಡೆ ಮಾಡಿತು. ಒಂದು ಇಮೇಜಲ್ಲಿ ಹೇಳ್ತೀನಿ. ಸಾಮಾನ್ಯವಾಗಿ ಟಿ ಶರ್ಟ್ ನೆಲ್ಲ ಅದರ ಪ್ರಿಂಟ್ Fade ಆಗ್ಬಾರ್ದು ಅಂತ ಉಲ್ಟಾ ಮಾಡಿ ಒಗೆದು ಹಾಕ್ತಿವಿ ನಾವು. ಮುಂಬೈ ನನ್ನನ್ನ ಆ ತರಹ ಉಲ್ಟಾ ಮಾಡಿ ಒಣ ಹಾಕಿಬಿಡ್ತು ಅಂತ ಹೇಳ್ತೀನಿ. It liberated me from everything.
Twenty-five years I was there, ನನಗೆ ಯಾರೂ ಅಲ್ಲಿರೋ ತನಕ ನಿನ್ನ ಜಾತಿ ಯಾವುದು, ವೇಜ್ಜೂ ನಾನ್ ವೇಜ್ಜೂ, ವೆಹಿಕಲ್ ಇಟ್ಕೊಂಡಿದ್ದೀಯೋ ಇಲ್ವೋ, ಸ್ವಂತ ಮನೆನೋ ಬಾಡಿಗೆ ಮನೆನೋ, ವೆಹಿಕಲ್ ಇಟ್ಕೊಂದಿದ್ರೆ ಫಸ್ಟ್ ಹ್ಯಾಂಡೋ ಸೆಕೆಂಡ್ ಹ್ಯಾಂಡೋ, ಸೆಕೆಂಡ್ ಹ್ಯಾಂಡ್ ಆದರೆ ಗ್ಯಾಸಲ್ಲಿ ನಡೆಸುತ್ತಿದೆಯೋ, ಪೆಟ್ರೋಲಲ್ಲಿ ನಡೆಸುತ್ತಿದೆಯೋ? ಈ ಯಾವ ಪ್ರಶ್ನೆನೂ ಕೇಳಲ್ಲಿಲ್ಲ. ಈ ಎಲ್ಲ “periodic table questions” I heard after coming to Bengaluru.
ಅಲ್ಲಿ ಕೇಳಿದ್ದು ಒಂದೇ ಪ್ರಶ್ನೆ, ಕ್ಯಾ ಕಾಮ್ ಕರ್ತಾ, ಏನು ಕೆಲಸ ಮಾಡ್ತೀಯಾ ಅನ್ನೋ ಒಂದು ಪ್ರಶ್ನೆ ಮಾತ್ರ ಕೇಳಿದ್ದು. That is the ಲಕ್ಷಣ of a working city. ಅದಕ್ಕಾಗೇ ನನ್ನ ಒಂದು ಪುಸ್ತಕ ಹಾಗೆ dedicate ಮಾಡಿದ್ದೀನಿ. ಕಾಯಕದ ಕೈಲಾಸವಾದ ಮುಂಬೈಗೆ ಮತ್ತು ಕೈಲಾಸವೇ ಕಾಯಕವಾದ ಗೋಕರ್ಣಕ್ಕೆ ಅಂತ. ಗೋಕರ್ಣದಲ್ಲಿ ಕೈಲಾಸವೇ ಕಾಯಕ. Outsider ಹೋಗಿ ಮುಂಬೈಯಲ್ಲಿ ಇರ್ತಾನಲ್ಲ he will discover the bylanes and the secrets of the city better than the person who is born and brought up there. ಹೋದವರಿಗೆ ಒಂದು ಬೇರೆ ತರ anonymity ಮತ್ತು ಫ್ರೀಡಂ ಬರುತ್ತೆ. ಅದರ ಜೊತೆಗೆ ಒಂದು responsibility ಬರುತ್ತೆ. So, they are all connected. And I never felt alienation, loneliness, ಅದು ಒಂದು ತರಹ cliche, ಒಂದು ತರಹ romanticization. Ek Akela is shehar mein abudana dhoondta hai, that kind of thing happens if you are obsessed with yourself. Loneliness is the price paid by the self obsessed. If you love life, then ಬರಲ್ಲ ಅದು. Many of the people mistake love for themselves as love for others. They want to love themselves through others ಆದಾಗ ಇವೆಲ್ಲ ರಗಳೆಗಳು ಆಗೋದೂ.
ಮತ್ತೆ ಮುಂಬೈಯಲ್ಲಿ ಇನ್ನೊಂದು ಏನು ಅಂದ್ರೆ ಚಿತ್ತಾಲರು , ಅರವಿಂದ ನಾಡ್ಕರ್ಣಿ ಇಂತಹ major writers were there. ಚಿತ್ತಾಲ್ was writing ಶಿಕಾರಿ, his major novels ಪುರುಷೋತ್ತಮ, ಛೇದ. I heard them in his voice . Every weekend I used to go, ಓದಿ ಹೇಳ್ತಿದ್ರು. ಅರವಿಂದ ನಾಡ್ಕರ್ಣಿ, poet, ಅವರ ಮನೆಗೆ ಹೋಗ್ತಿದ್ದೆ. ನಾವೆಲ್ಲ bachelors, ಯಾವುದಾದರೂ ಮನೆಊಟ ವೀಕೆಂಡ್ ಸಿಕ್ಕಿದ್ರೆ ಖುಷಿಯಲ್ಲ ಹೋಗೋಕೆ. ಸತ್ಯದೇವ್ ದುಬೆ was very, very active. ಅಲ್ಲಿ ಅರೆ! ಮಾಯಾವಿ ಸರೋವರ್ , ಬಾದಲ್ ಸರ್ಕಾರ ನಾಟಕಗಳು ಎಲ್ಲ ನೋಡಿದ್ದು ನಾನು … ಅಲ್ಲಿ ಮಜಾ ಅಂದ್ರೆ ನಾಟಕ ನೋಡೋದಕ್ಕೆ ಐದು ರೂಪಾಯಿ. ಆದರೆ ನೀವು rehearsal ನೋಡಬಹುದಾಗಿತ್ತು ಒಂದು ರೂಪಾಯಿಗೆ. I saw ಅನಂತ್ ನಾಗ್ rehearsing on a terrace for a Konkani play. ಆಗ, he was not a film actor, ಆಮೇಲೆ ಅಂಕುರ್ ಬಂತು.
ನೀವು ಒಂದು ಸಲ ಹೇಳಿದ್ರಿ, ನಿಮ್ಮ ಕತೆಗಳು ಪ್ರಾರಂಭದಿಂದ ಅಂತ್ಯದವರೆಗೂ ನೀವು ಒಂದೇ ಸಾರಿ ಬರೆಯುತ್ತೇನೆ ಅಂತ. ಆಮೇಲೆ ನೀವು ನಾವು ವೇಗವಾಗಿ ಬರೆಯುತ್ತೇವೆ, ಆದರೆ ನಮ್ಮ ಮನಸ್ಸು (speed of thought) ಅದಕ್ಕಿಂತ ವೇಗವಾಗಿ ವಿಚಾರ ಮಾಡುತ್ತದೆ ಅಂತ ಹೇಳಿದ್ರೆ, ಆದರೆ ನಮ್ಮ ಮನಸ್ಸು ಎಷ್ಟು ವೇಗವಾಗಿ ಕೆಲಸ ಮಾಡುತ್ತೋ ಅಷ್ಟೇ ಚಂಚಲ. ಆದ್ದರಿಂದ ನೀವು ಕತೆ ಬರೀಬೇಕಾದ್ರೆ ನಿಮ್ಮ ಮನಸ್ಸಿನಲ್ಲಿ ಒಂದು ಭಿನ್ನಾಭಿಪ್ರಾಯ ಬಂದ್ರೆ ಅದನ್ನ ಹೇಗೆ ನಿಭಾಯಿಸ್ತೀರಿ?
ಜಯಂತ ಕಾಯ್ಕಿಣಿ: ಕಥೆ ಬರೀಬೇಕಾದ್ರೆ ಏನಾಗುತ್ತೆ ಅಂದ್ರೆ, ಎಷ್ಟು ಅದರಲ್ಲಿ ಮುಳುಗಿರುತ್ತೆ ಅಂದ್ರೆ, I listen to my mind only. ನಾನು ತುಂಬಾ impulsive thinker and writer. I am driven by my mind only. ನಾನು ತುಂಬಾ think ಮಾಡೋದೇ ಇಲ್ಲ. I just go as per the flow… ಅದಕ್ಕಾಗೇ ನಾನು ಕೈಯಲ್ಲಿ ಬರೆಯೋದು. ಅದು ನಿಲ್ಲಿಸು ಅಂದ್ರೆ ನಿಲ್ಲಿಸ್ತೀನಿ ನಾನು, ಅದು ಮುಗೀತು. ಕತೆನೇ ಹೇಳುತ್ತೆ ಸಾಕಪ್ಪ ಬಿಡು ನಿನ್ ಸಹವಾಸ ಸಾಕು ಅಂತ. Whenever I have fiddled with the story, ಅಂದ್ರೆ ಏನೇನೋ ಬೇಡ ಅಂತ ಹೇಳಿದಾಗ ಅಲ್ಲೇ ಅಲ್ಲಿ ಅಪಸ್ವರ ಶುರುವಾಗುತ್ತೆ ಕಥೆದು. ಕಥೆದೇ ಒಂದು space ಇದೆ, so ಅಲ್ಲಿ ಅದನ್ನ ನಿಲ್ಲಿಸಬೇಕು. ಇಲ್ಲೂ ಕೂಡ ಚಿತ್ತಾಲರು ಹೇಳ್ತಾರೆ ಒಂದು ಕಡೆ, I don’t write what I know; I write to know ಅಂತ. See, writing is a mode of thought for him. I know something and I am writing it ಅಂತಂದ್ರೆ ಅದು arrogance ಆಗ್ತದೆ ಅದು. I am trying to know something. Writing is a window. Through that window, I am trying to see what it is… so, ಅಲ್ಲಿ ನನಗೆ ಏನು ಸಿಗತ್ತೋ ಹುಡುಕ್ತಾ ಹೋಗ್ತೀನಿ.
Usually, my stories are looking for a moment of transformation in an individual through an incident ಅಷ್ಟೇ. ಅದು ಆದ ಕೂಡ್ಲೇ ಮುಗಿತು ಕಥೆ ಅಲ್ಲೇ ಅದು. But ಅದು ಒಂದು ಸೆಂಟೆನ್ಸ್ನಲ್ಲಿ ಹೇಳಿದ್ರೆ ಅದು ಆಗೋದಿಲ್ಲ. ಆ transformation ಗೆ ಒಂದು lead ಇರುತ್ತಲ್ಲ, ಆ leadಗೆ ಹೋಗೋದೇ ಕಥೆ. ಆಮೇಲೆ ನನ್ನ ಕಥೆಯಲ್ಲಿ conventional end ಇಲ್ಲ ಅಂತ ಎಷ್ಟೋ ಜನ ಹೇಳ್ತಾರೆ. ನನ್ನ ತಾಯಿ ಅವರಿಗೆ ಬಹಳ ಅದರ ಬಗ್ಗೆ ಬಹಳ disappointment ಇತ್ತು. ಏನೇ ಕತೆ ಪುಸ್ತಕ ಇರ್ಲಿ ಕತೆ ಇರ್ಲಿ ಕಾದಂಬರಿ ಕೊಟ್ರು ಮೊದಲು last page ಓದ್ತಿದ್ರು. ಅವರಿಗೆ. ಯಾಕೆ ಅಂತಂದ್ರೆ tension ಬೇಡ ಅಂತ, ಯಾಕಂದ್ರೆ ಯಾರು ತೀರಿಕೊಂಡ್ರೋ ಅಥವಾ ಓಡಿಹೋದ್ರೋ ಇಲ್ಲ್ವೋ, ಮದುವೆ ಆಯ್ತೋ ಇಲ್ವೋ ಅದೆಲ್ಲ ಅವರಿಗೆ ಮೊದಲು ಗೊತ್ತಾಗ್ಬೇಕು. ಕಳ್ಳ ಯಾರು? ಕೊಲೆಗಾರ ಯಾರು? So, ನನ್ನ ಕಥೇಲಿ ಅಂಥದು ಏನೂ ಇಲ್ಲಾ. So, she was always disappointed.
ಅನಿಸುತಿದೆ ನನಗೆ ಇಂದು - ಜಯಂತ ಕಾಯ್ಕಿಣಿ ಜೊತೆಗೆ ಸಂವಾದ
ನಿಮ್ಮ ಕತೆಗಳಲ್ಲಿ ಒಂಥರಾ ಬಹುತೇಕ ಪಾತ್ರಗಳು ಸಾಮಾನ್ಯ ಜನರು. ನೀವು ಮೊದಲು ಮುಂಬೈಯಲ್ಲಿ ಬರೆದಿರೋ ಕತೆಗಳಂತೂನೂ ಒಂಥರಾ ನಿಜ ಜೀವನದಲ್ಲಿ ನಾವು ಗಮನಿಸುವುದೇ ಇಲ್ಲ. ಆತರ ಪಾತ್ರಗಳು ನೀವು ಒಂಥರಾ ನಿಮ್ಮ ಕತೆನಲ್ಲಿ ಈ ತರಹ ಜನರ ಒಂದು ಅವರ ಮನಸ್ಸು, ಆಲೋಚನೆ, ಆಸೆ, ಅವರದು ಏನೇನು ಭಾವನೆ ಇರುತ್ತೆ ಅದನ್ನ ಒಂಥರಾ ನೀವು ನಮಗೆ ಪರಿಚಯಿಸ್ತಿರಾ. ಒಂಥರಾ ಆಲ್ಮೋಸ್ಟ್ ಒಂದು ಕಪ್ಪು ಬಿಳುಪು ಜೀವನ ಅವರದು, ಅದರಲ್ಲಿ ಒಂಥರಾ ನೀವು ಕಲರ್ ತುಂಬಿ ಒಂಥರಾ ಕಲರ್ಫುಲ್ ಆಗಿ ಬರುತ್ತೆ ನೀವು ಬರೆದಿದ್ದು.
ಜಯಂತ ಕಾಯ್ಕಿಣಿ: ಆ ತರಹ ಆಯ್ಕೆ ಗೀಕೆ ಇಲ್ಲ ಅದು, ಅದೊಂಥರಾ they are part of your sensibility. ಈಗ ಇವತ್ತು ನಾನೇನಾದ್ರೂ ಒಂದು ಕತೆ ಬರೆದರೆ, ಆ ವ್ಯಕ್ತಿ ನಾನು ನಿನ್ನೆ ನೋಡಿದವನಾಗಿರಲ್ಲ. ನಾನು ಐವತ್ತು ವರ್ಷದ ಹಿಂದೆ ಎಲ್ಲೋ ನಮ್ಮ ಊರಲ್ಲಿ ನೋಡಿದವನಾಗಿರುತ್ತಾನೆ. ನಾವು ಅವರನ್ನು ಕಪ್ಪು ಬಿಳುಪು ಅಂತ ಅಂದುಕೊಂಡು ಬಿಡುವುದರಲ್ಲೇ ಪ್ರಾಬ್ಲಮ್ ಇದೆ. We are all extensions of each other ಅನ್ನುವ ಒಂದು element is the celebration of literature ಅಂತ ನಾನು ಅಂದುಕೊಂಡಿರುವುದು. See, there are thousands of people, ಅವರ ಋಣದಲ್ಲಿ ನಾವಿದ್ದೇವೆ. ಈ social indebtedness, ಸಾಮಾಜಿಕ ಋಣಾನುಬಂಧ ಅಂದ್ರೆ ಅದು. That is the real essence of our being.
ಆಮೇಲೆ ಜನಜೀವನದಲ್ಲಿ ಜನರೊಂದಿಗೆ ಪ್ರೀತಿಯಿಂದ ಬದುಕಿ, ಅಲ್ಲೂ ಕೂಡ ಇವರ ಬಗ್ಗೆ ಒಂದು ಕವಿತೆ ಬರೆಯಬೇಕು ಅಂತ ಹಿಂಗೇ ನಿಂತುಕೊಂಡು ನೋಡಬೇಡಿ. ನಿಮ್ಮ ಕತೆ ಮತ್ತು ಕವಿತೆಗಳಿಗೆ ವಸ್ತುಗಳನ್ನು ನಾವು ಹುಡುಕೊಂಡು ಹೋಗಬೇಕಾಗಿಲ್ಲ. ನನಗೆ ಒಬ್ಬರು ಕೇಳಿದರು, ಸರ್ ಒಳ್ಳೆಯ ಕವಿತೆಗಳು ಎಲ್ಲಿ ಸಿಗುತ್ತೆ? ನಾನಂದೆ, ಎಲ್ಲಿ network ಸಿಗಲ್ವೋ ಅಲ್ಲಿ ಸಿಗುತ್ತೆ. ಹೌದು , network ಎಲ್ಲಿ ಸಿಗಲ್ವೋ ಅಲ್ಲಿ ಒಳ್ಳೆ ಕವಿತೆ ಸಿಗುತ್ತೆ. Many people did not understand it. ನನ್ನನ್ನು troll ಮಾಡಿದ್ರು. ಇವರು ಯಾವ ಕಾಲದಲ್ಲಿ ಇದ್ದಾರೆ? Networkನಿಂದಾನೆ ನಾನೀಗ ತುಂಬಾ ಜನಪ್ರಿಯ ಆಗಿದ್ದೀನಿ ಅಂತ ಬರೆದರು. Posturing, networking ಅಂಡ್ self promotion, ಅದೇ essence ಅಂತ ಹೋಗಿದೆ ಈಗ…. ಅಂದ್ರೆ ಅದು ಬೇಕಪ್ಪ [ಆದರೆ] ಅದು secondary, but first ವಸ್ತು ಒಂದು ಸೃಷ್ಟಿ ಆಗ್ಬೇಕಲ್ಲ. ಅದಕ್ಕಾಗಿ ನಾವೆಲ್ಲ ಒಂದು ಅನ್ನುವಂತ ಭಾವನೆ ಬಹಳ important ಇದೆ.
ಒಬ್ಬ ಸಚಿನ್ ತೆಂಡೂಲ್ಕರ್ ಬ್ಯಾಟ್ ಮಾಡಲಿಕ್ಕೆ ನಿಂತ್ರೆ, ಅಲ್ಲಿ ಬ್ಯಾಟ್ ಮಾಡ್ತಿರೋದು ಶುದ್ಧವಾದ ಒಂದು ಮನುಷ್ಯ ಜೀವ. ಸಚಿನ್ ತೆಂಡೂಲ್ಕರ್ ಅನ್ನೋ ಹೆಸರು ಕೂಡ ಅಲ್ಲ ಅದು. ಒಬ್ಬ ಕಿಶೋರಿ ಅಮೋನ್ಕರ್ ಆಲಾಪ ಮಾಡ್ತಿದ್ರೆ ಒಂದು ಶುದ್ಧವಾದ ಒಂದು ಜೀವ. ಎಸ್ ಪಿ ಬಾಲಸುಬ್ರಹ್ಮಣ್ಯಂ ಹಾಡ್ತಿದ್ರೆ ಶುದ್ಧವಾದ ಜೀವ ಅದು. ಆ ಹೆಸರು ಕೂಡ ಅಲ್ಲ. ಈ writer ಕೂಡ ಬರೀಬೇಕಾದ್ರೆ ಅದು ಆ ತರದ ಒಂದು ಜೀವ, ಜೀವಾತ್ಮ ಎಲ್ಲರನ್ನು ಒಳಗೊಂಡಂತದ್ದು. ಒಳಗಡೆ ಹೋಗಿ ಯೋಗ ಅದು ಇದು ಮಾಡಿ ಹೊರಗಡೆ ಬಂದ ತಕ್ಷಣ ಮತ್ತೆ ತಲೆಯಲ್ಲಿ ಎಲ್ಲ man-made divisions. ನಮ್ಮ ಅಕ್ಕ ಪಕ್ಕ ಎಲ್ಲ ನಮ್ಮವರೇ ಇದ್ದಾರೆ, ಅಲ್ಲಿ ಬರೀ ಅವರು ಅಂತ. ಯಾರು ಅವರು ಇವರು? ರಮಣ ಮಹರ್ಷಿಗಳು ಹೇಳಿದ್ರು there is no others ಅಂತ.
ನೀವು ಎಕ್ಸ್ಟ್ರಾ ಸಾಂಬಾರ್ ಅಂತ ಒಂದು ಪ್ರಬಂಧ ಎರಡು ಸಾವಿರದ ನಾಲ್ಕರಲ್ಲಿ ಬರೆದಿದ್ರಿ, ಎಷ್ಟು ವಿವರಣಾತ್ಮಕವಾಗಿ, ಹಾಸ್ಯಮಯವಾಗಿ ಬರೆದಿದ್ರಿ ಅಂದ್ರೆ, ಉದಾಹರಣೆಗೆ, ಸೈಟುಗಳ ಕನಸು ಹೊತ್ತ ಹೆಲ್ಮೆಟ್ಗಳು. ಒಂದು ಲೀಟರ್ ಸಾಂಬಾರ್ ಕೊಟ್ಟರೂ ಮೊದಲನೇ ಇಡ್ಲಿಗೆ ಅದನ್ನು ಮುಗಿಸಿ ಎರಡನೇ ಇಡ್ಲಿಗೆ ಎಕ್ಸ್ಟ್ರಾ ಸಾಂಬಾರ್ ಪಡೆಯಲು ಎಂಥ ಸಂದಣಿಯಲ್ಲೂ ಈಜಿಕೊಂಡು ಸೂಪರ್ ಮ್ಯಾನ್ ನಂತೆ ಕೌಂಟರ್ ನಡೆಗೆ ಧಾವಿಸಬಲ್ಲ ಮಹತ್ವಾಕಾಂಕ್ಷಿ, ಫುಟ್ ಪಾತ್ ಅನ್ನು ಅಕ್ರಮವಾಗಿ ಕಬಳಿಸಿರುವ ದರ್ಶಿನಿ, ಎಡಪಂಥೀಯ ಚಾಲಕರು, ನೀಲಿ ಕನ್ನಡಕ ತೊಟ್ಟ ಗಂಭೀರ ಕಟ್ಟಡಗಳು . ಇಪ್ಪತ್ತೆರಡು ವರ್ಷ ಆದ್ಮೇಲೂ ಇವತ್ತಿಗೂ ನಿಜ ಆಗಿದೆ, ಒಂಥರಾ timeless truth. ಈಗ ನಿಮಗೆ ಬೆಂಗಳೂರಿನ ಬಗ್ಗೆ ಈಗ ಏನನಿಸುತ್ತೆ?
ಜಯಂತ ಕಾಯ್ಕಿಣಿ: ಊರ್ಧ್ವಮುಖಿ ಕಟ್ಟಡಗಳು ಜಾಸ್ತಿಯಾಗಿವೆ ಈಗ, multi-storey apartments ಜಾಸ್ತಿಯಾಗಿವೆ, ತುಂಬಾ ಜಾಸ್ತಿಯಾಗಿದೆ. Too much of cement, too much of pollution, ತುಂಬಾ ಆಗಿದೆ. ಮೆಟ್ರೋ ಇರ್ಲಿಲ್ಲ ಆಗ, ಈಗ ಮೆಟ್ರೋ ಇದೆ. ಹಾ, ಮತ್ತೆ ಆವಾಗ ರಂಗಶಂಕರ ಇರ್ಲಿಲ್ಲ. ರಂಗಶಂಕರ is playing a good role in theatre. See, theatre is very important, ಅದು ಥಿಯೇಟರಿನ ಅಭಿರುಚಿ ಹೆಚ್ಚು ಮಾಡಕ್ಕೆ. ರಂಗಶಂಕರ ಕೂಡ is inviting people, every year. ಮೂರು ನಾಲ್ಕು ಫೆಸ್ಟಿವಲ್ ಮಾಡ್ತಾರೆ. ದೇಶದ ಬೇರೆ ಬೇರೆ ಕಡೆಯಿಂದ ಒಳ್ಳೊಳ್ಳೆ theatre groups ಕರಸ್ತಾರೆ.
ನೀವು ಇನ್ನೊಂದು ಕಡೆ ಹೇಳಿದ್ರಿ, ಬೆಂಗಳೂರು ಒಂದು ಕಾಲದಲ್ಲಿ ಸಾಹಿತ್ಯದ ದಿಗ್ಗಜರ ತವರೂರಾಗಿತ್ತು ಅಂತ, ನಿರಂಜನ ಮತ್ತು ಜಯನಗರ, ಬಸವನಗುಡಿ ಮತ್ತು ಲಂಕೇಶ್ ಈತರಹ, ಇಂದು ನಮ್ಮ ಈ ಸಮಾಜ ಸಂಸ್ಕೃತಿಯಲ್ಲಿ, ಸಾಹಿತ್ಯ – ಅದರಲ್ಲೂ ಕನ್ನಡ ಸಾಹಿತ್ಯ – ಒಂಥರಾ ಸ್ಥಾನ ಇದಿಯಾ, ಕಳ್ಕೊತಾ ಇದಿಯಾ?
ಜಯಂತ ಕಾಯ್ಕಿಣಿ: ಇಲ್ಲ, ಈ ಎಲ್ಲಾ ಕಡೆನೂ ಅದೊಂದು universal problem. ಯಾಕಂದ್ರೆ reading ಕಡಿಮೆಯಾಗಿದೆ, ಆದರೆ infrastructure wise ತುಂಬಾ ಮೊದಲಿಗಿಂತ ಹೆಚ್ಚು publication ಆಗ್ತಿದೆ ಈಗ, ಯಾಕಂದ್ರೆ publication is easy. ಈಗ DTP ಎಲ್ಲ ಅವರೇ ಮಾಡಿಕೊಡ್ತಾರೆ. ಮೊದಲು ಆದರೆ ಮೊಳೆ ಜೋಡಿಸಿ ಪ್ರಿಂಟ್ ಮಾಡೋ ಟೈಮಲ್ಲಿ ಕನಿಷ್ಠ ಒಂದು ಸಾವಿರನಾದರು ಪ್ರಿಂಟ್ ಮಾಡಬೇಕಿತ್ತು ಅಥವಾ ಐನೂರು ಪ್ರತಿ. ಈಗ ಹಾಗಲ್ಲ, ಯಾವಾಗ ಬೇಕಾದರೂ ಪ್ರಿಂಟ್ ಮಾಡ್ಕೋಬಹುದು ಪುಸ್ತಕನ. ಹೀಗಾಗಿ they print not more than hundred copies when a new book comes nowadays. ನಾನು ಸಿನಿಮಾದಲ್ಲಿ ಹಾರ್ಟ್ ಬ್ರೇಕ್ ಅಂತ ಲವ್ ಸಾಂಗ್ಸ್ ಬರೀತೀನಿ, ಆದರೆ ಇದನ್ನು ಕೇಳಿ ನನ್ನ ಹಾರ್ಟ್ ಬ್ರೇಕ್ ಆಯಿತು. ಆಮೇಲೆ when there is an order from the bookshops only publisher prints extra copies. This is the current situation, so it is not a very encouraging sign.
ನೀವು ನಾಟಕ, ಕತೆ, ಪ್ರವಾಸ ಕಥನ, ಪ್ರಬಂಧ, ಚಿತ್ರಕತೆ, ಸಂಭಾಷಣೆ ಎಲ್ಲದರಲ್ಲೂ ನೀವು ಬರೆದಿದ್ದೀರ, ಇದರಲ್ಲಿ ಯಾವುದಾದರೂ ನಿಮ್ಮ ನೆಚ್ಚಿನದು ಯಾವುದು? ಅಥವಾ ಯಾವುದು ತುಂಬಾ ನಿಮಗೆ ಸುಲಭ ಅಥವಾ ಕಷ್ಟ ಅನ್ಸುತ್ತೆ?
ಜಯಂತ ಕಾಯ್ಕಿಣಿ: ಇಲ್ಲ, ಎಲ್ಲದಕ್ಕೂ ಅದರದ್ದೇ ಕಷ್ಟ ಸುಖ ಇದ್ದೇ ಇದೆ. ಎಲ್ಲ ಅರ್ಧಕ್ಕರ್ಧ ಅದು ಆಯ್ಕೆಯಿಂದ ಆದದ್ದಲ್ಲ, ಅಂದ್ರೆ ಜೀವನೋಪಾಯಕ್ಕೆ ಅಂತ ಬಂದದ್ದು, ಕೆಲವೊಂದು ನಿರ್ವಾಹ ಇಲ್ಲದೆ ಆಗಿದ್ದು. But quickest is the poetry. ನಂದು ಒಂದು ಮೊದಲು habit ಇತ್ತು, ಕತೆ ಬರೀಬೇಕು ಅಂತಿದ್ರೆ ಮೊದಲು ಒಂದಿಷ್ಟು ಪೆನ್ಸಿಲ್ ಶಾರ್ಪ್ ಮಾಡಿದ ಹಾಗೆ ಕವಿತೆ ಬರೆಯೋದು ಒಂದೆರಡು, ಆಮೇಲೆ ಕತೆ ಬರೆಯೋದು, ಆತರಹ.
ಈ ನಿಮ್ಮ ಪುಸ್ತಕದ ಇಂಗ್ಲಿಷ್ ಅನುವಾದ ಬಂತಲ್ಲ, ನೋ ಪ್ರೆಸೆಂಟ್ಸ್ ಪ್ಲೀಸ್ ಆಮೇಲೆ ಮಿಥುನ್ ನಂಬರ್ ಟು. ಅದರಲ್ಲೂ ನೋ ಪ್ರೆಸೆಂಟ್ಸ್ ಪ್ಲೀಸ್ ಅಂತರಾಷ್ಟ್ರೀಯ ಬಹುಮಾನ ಬಂತು. ಈ ಅನುವಾದ ಮಾಡುವ ಪ್ರಸ್ತಾವ ಹೇಗೆ ಬಂತು?
ಜಯಂತ ಕಾಯ್ಕಿಣಿ: ತೇಜಸ್ವಿನಿ ನಿರಂಜನ ಇದ್ದಾರಲ್ಲ, we are contemporaries. ಮೊದಲಿಂದಾನೂ she has been liking my stories and ಅವರು ಸುಮಾರು ಹದಿನೈದು ವರ್ಷದಿಂದಾನೂ ತನಗೆ ಅನುಕೂಲ ಆದಾಗ ಅವರು ಇಷ್ಟವಾದ ಸ್ಟೋರಿಗಳನ್ನು [ಅನುವಾದ] ಮಾಡ್ತಾ ಇಟ್ಕೊಂಡಿದ್ರು. ಆಮೇಲೆ suddenly ಅವರಿಗೆ ಅನ್ನಿಸ್ತು ಇದೆಲ್ಲ ಸೇರಿಸಿ ಯಾಕೆ ಒಂದು [ಪುಸ್ತಕ] ಮಾಡಬಾರದು ಅಂತ. It was her idea. ಯಾಕಂದ್ರೆ ನಾನು ಆ ಕತೆಗಳೆಲ್ಲ ಒಟ್ಟಿಗೆ ಬರೆದ ಕತೆಗಳಲ್ಲ, ಬೇರೆ ಬೇರೆ collectionಇಂದ, ಆಯಿದಂತ ಕತೆಗಳಿಂದ pick ಮಾಡಿದ್ದು. I always feel translation is safest in the hands of a poet. She is basically a poet…one of the finest poet ಅವರು. She wrote her first collection of poetry in English called Liquid Sapphire. ಅವರ ತಂದೆ ನಿರಂಜನ publish ಮಾಡಿದ್ರು. I think it was also in 1973 or 1972, ನನ್ನ ಪುಸ್ತಕ ಬಂದಾಗಲೇನೇ ಅವರದ್ದು ಪುಸ್ತಕ ಬಂದಿತ್ತು. She was a child prodigy, very brilliant. ನನ್ನ ಶಾರ್ಟ್ ಸ್ಟೋರೀಸ್ನಲ್ಲಿ there is a lot of poetic element in my expression. She has tried her best to keep it intact and it is very safe. ನಂದು ಬಹಳ ಕಷ್ಟ ಇದೆ. ಅಂದ್ರೆ entire ಅದರದು ಒಂದು rhythm ಇರುತ್ತೆ ಸೆಂಟೆನ್ಸಿನಲ್ಲೇ. ಅದನ್ನ she captures it very well, so, in fact I am very thankful to her for doing it. ಆಮೇಲೆ next collection ಕೂಡ ತುಂಬಾ ಚೆನ್ನಾಗಿ ಮಾಡಿದ್ರು ಅವರು. Mithun Number Two. ಫಸ್ಟ್ ಕಲೆಕ್ಷನಿನಲ್ಲಿ ಮುಂಬೈಯಲ್ಲಿ ಇದ್ದಂತಹ ವ್ಯಕ್ತಿಗಳದ್ದೇ ಚಿತ್ರಣ ಇದೆ. ಸೆಕೆಂಡ್ ಕಲೆಕ್ಷನಿನಲ್ಲಿ ಒಂಥರಾ migration element ಇದೆ. ಊರಿಂದ ಹೋದವರು ಬೇರೆ ಊರಿಂದ ಬಂದವರು ಆ ತರಹದ್ದು ಇದೆ.
ನಿಮ್ಮ ನೆಚ್ಚಿನ ಲೇಖಕರು ಅಥವಾ ಪುಸ್ತಕಗಳು ಯಾವುದು? ಈಗ ನೀವು ಏನು ಓದುತ್ತಾ ಇದ್ದೀರಾ?
ಜಯಂತ ಕಾಯ್ಕಿಣಿ: ನನಗೆ ಶಾಂತಿನಾಥ ದೇಸಾಯಿ, ಚಿತ್ತಾಲರು ಆಮೇಲೆ ಅನಂತಮೂರ್ತಿ, ಲಂಕೇಶ್, ತೇಜಸ್ವಿ, ರಾಘವೇಂದ್ರ ಖಾಸನೀಸ್ ಇವರೆಲ್ಲ ಬಹಳ ಇಷ್ಟ. Poetsಯಲ್ಲಿ ಎ.ಕೆ. ರಾಮಾನುಜನ್, ಕೆ.ವಿ. ತಿರುಮಲೇಶ್, ಆಮೇಲೆ ಜೆ.ಎಸ್. ಅವಧಾನಿ ಅಂತ ಒಬ್ರಿದ್ರು ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲಿ ಅವರದೊಂದು poetry collection ನಮ್ಮ ತಂದೆಗೆ ಮುನ್ನುಡಿಗಾಗಿ ಬಂದಿತ್ತು. ನನಗಾಗ paratyphoid ಆಗಿತ್ತು. ಆಗ ಮನೆಯಲ್ಲಿದ್ದೆ ನಾನು, I was in PUC ಅದನ್ನು ಓದಿದೆ ನಾನು, ಅದನ್ನು ಓದಿರದಿದ್ದರೆ ಬಹುಶಃ ನಾನು ಕವಿನೇ ಆಗ್ತಿರ್ಲಿಲ್ಲ. It was a different kind of poetry. ಆಮೇಲೆ ಇವರದು ಹಾಗೆ ಎ.ಕೆ. ರಾಮಾನುಜನ್ ಅವರ ಹೊಕ್ಕುಳಲ್ಲಿ ಹೂವಿಲ್ಲ, ಆಮೇಲೆ ಗಂಗಾಧರ ಚಿತ್ತಾಲ್ ಅವರದ್ದು ಹರಿವ ನೀರಿದು ಮತ್ತು ತಿರುಮಲೇಶ್ವರ ಮುಖಾಮುಖಿ. ಈ four collections of poetry, they made me a poet.
Poetry ಅಂದ್ರೆ meaning ಅಲ್ಲ, poetry is an experience ಅನ್ನೋದನ್ನ ಅನುಭವಕ್ಕೆ ತಂದಂತಹ ಕವಿಗಳು ಅವರು. ನಮ್ಮಲ್ಲೆಲ್ಲರೂ meaning, meaning, meaning ಅಂತ, ಇದರ ಅರ್ಥ ಏನು? ಅರ್ಥ ಏನು? ಅಂತ ಕೇಳ್ತಾರೆ . ಅರೆ ನಾನು ಹೇಳ್ದೆ ಲೈಫ್ ಗೆ ಅರ್ಥ ಇಲ್ಲ, ಕವಿತೆಗೆಲ್ಲಿಂದ ಬರಬೇಕು.
ನಿಮ್ಮ ಸಿನಿಮಾ ಹಾಡು ಬಹಳ ಅರ್ಥಪೂರ್ಣ [ಅಂತ ಹೇಳ್ತಾರೆ]… ಅರ್ಥಪೂರ್ಣ ಇಲ್ಲಪ್ಪಾ ಅದು. ಅರ್ಥ ಅಂದ್ರೆ ಆ ಹುಡುಗಿಗೆ ಆ ಹುಡುಗನ ಮೇಲೆ ಪ್ರೀತಿಯಾಗಿದೆ, ಅವನಿಗೆ ಏನೋ ಹೇಳಬೇಕಾಗಿದೆ, ಅಲ್ಲಿ ನನ್ನ poetic element ಏನಿದೆ ಅದೂ ಕೂಡ ಅಲ್ಲಿ ಪಾರ್ಟ್ ಮಾಡಿದೆ, ಅಷ್ಟೇ.
ನನ್ನ ಕವಿತೆ ಬೇಕು ಅಂತಂದ್ರೆ ನನ್ನ ಕಲೆಕ್ಷನ್ ಓದಿ ನೀವು, ಅಲ್ಲಿ ನನ್ನ ಕವಿತೆ ಇದೆ. ಸಿನಿಮಾದಲ್ಲಿ ಹೇಗೆ ನಟ ರೋಲ್ ಮಾಡ್ತಿದ್ದಾನೋ ಹಾಗೆ ನನ್ನ ಕಾವ್ಯ ಅಲ್ಲಿ ರೋಲ್ ಮಾಡ್ತಿದೆ. ಎಷ್ಟೋ ಜನಕ್ಕೆ ನನ್ನ ಕಾವ್ಯ ಬೇರೆ ಇದೆ ಅಂತಾನೂ ಗೊತ್ತಿಲ್ಲ, ಅವರು ಅದೇ ನನ್ನ ಕಾವ್ಯ ಅಂತ ತಿಳ್ಕೊಂಡಿದ್ದಾರೆ. It’s a role play of a poet, ಗೀತ ರಚನೆ. It’s very difficult, ಅಲ್ಲೂ ಕೂಡ ತುಂಬಾ skill ಬೇಕು, ಯಾಕೆಂದ್ರೆ it is written for a pre-composed tune, which is not at all easy.
ಈ ಹೊಸ ಜನರೇಷನ್ ನಲ್ಲಿ ಅವರಿಗೆ ಸಾಹಿತ್ಯ, ಕಲೆ ಇದರಲ್ಲೆಲ್ಲಾ ಆಸಕ್ತಿ ಇದೆ ಅಂತ ಅನ್ಸುತ್ತಾ?
ಜಯಂತ ಕಾಯ್ಕಿಣಿ: ಒಂದೆರಡು ಒಳ್ಳೆಯ ಪುಸ್ತಕ ಓದಿದರೆ, ಅವರಿಗೆ ರುಚಿ ಗೊತ್ತಾದರೆ, ಆವಾಗ ಅವರ ಪಾಡಿಗೆ ಗಾಡಿ ಶುರುವಾಗುತ್ತೆ. ಅದು ಹಿಂದಿನ ಕಾಲದಲ್ಲಿ ಸ್ಟಾರ್ಟಿಂಗ್, ಮುಂದುಗಡೆ ರಾಡ್ ಹಾಕಿ ಸ್ಟಾರ್ಟ್ ಮಾಡ್ತಿದ್ರಲ್ಲ ಕಾರು, ಆತರ ಅವರಿಗೆ start ಮಾಡಿ ಬಿಟ್ಟುಬಿಡಬೇಕು ಅಷ್ಟೇ. See, the new generation is different, this preaching mode has gone, it has no more meaning. ಇಪ್ಪತ್ತು ನಿಮಿಷದ ನಂತರ ಯಾರ ಮಾತು ಯಾರೂ ಕೇಳೋಲ್ಲ, ಎಲ್ಲರೂ ಮೊಬೈಲ್ ನೋಡ್ತಾ ಕೂತಿರ್ತಾರೆ. ನಾವು ಸಾಹಿತಿಗಳು ಹೊಡೀತಾನೆ ಇರ್ತೀವಿ ಭಾಷಣ. ಯಾರಿಗೆ ತಾನು ಏನು ಹೇಳಬೇಕೋ ಅನ್ನೋದನ್ನ ಹತ್ತು ನಿಮಿಷದಲ್ಲಿ ಹೇಳೋಕೆ ಬರೆದಿದ್ದರೆ ಅವನಿಗೆ ಎರಡು ತಾಸು ಕೊಟ್ರು ಹೇಳಕ್ಕಾಗಲ್ಲ ನನ್ನ ಪ್ರಕಾರ.
